ಕವನ

ಭೂಮಿ

ಇರುವ ಒಂದೇ ಭೂಮಿಯ
ಒಂದು ತುದಿಯಲ್ಲಿ
ಯುದ್ಧಗಳು ನಡೆಯುತ್ತಿವೆ
ಗುಂಡುಗಳು ಸಿಡಿಯುತ್ತಿವೆ
ತುಂಬಾ ಸಲೀಸಾಗಿ
ಜೀವಗಳು ಬಲಿಯಾಗುತ್ತವೆ.

ಇರುವ ಒಂದೇ ಭೂಮಿಯ
ಇನ್ನೊಂದು ಮೂಲೆಯಲ್ಲಿ
ರೈತ ತನ್ನ ಹೊಲಕ್ಕೆ ನೀರುಣಿಸಿದ್ದಾನೆ
ಸಸಿಗಳು ಚಿಗುರಿವೆ
ಹೂವುಗಳು ಅರಳಿವೆ
ಅಷ್ಟೇ ಸರಳವಾಗಿ ಗಾಳಿಯೊಂದಿಗೆ
ಪರಿಮಳವು ಬೆರೆತಿದೆ.
~•~

ಲೋಕ

ದೇವರನ್ನು ಸ್ಮರಿಸುತ್ತ
ಬಡತನದಲ್ಲಿಯೇ ಬದುಕಿದ ಅಪ್ಪ
ಕೊನೆಗೊಂದು ದಿನ
ಹರಕು ಚಾಪೆಯ ಮೇಲೆ ಸತ್ತ

ತಾಜಾ ಹಣ್ಣುಗಳನ್ನು ಸೇವಿಸುತ್ತ
ಹವಾನಿಯಂತ್ರಿತ ಕಾರಿನಲ್ಲಿ ಸಂಚರಿಸುತ್ತಿದ್ದ
ಮಠದ ಶ್ರೀ ಗಳು
ಸುಪ್ಪತ್ತಿಗೆಯ ಮೇಲೆ
ಮಲಗಿದ್ದಲ್ಲಿಯೇ ಇಹಲೋಕ ತ್ಯಜಿಸಿದರು.
~•~

( ಅಂತರ್ಜಾಲ ಪತ್ರಿಕೆ ‘ಪಂಜು’ ವಿನಲ್ಲಿ ಪ್ರಕಟ. ಅದರ ಲಿಂಕ್ ಇಲ್ಲಿದೆ)

http://www.panjumagazine.com/?p=10191

ನಿಮ್ಮ ಟಿಪ್ಪಣಿ ಬರೆಯಿರಿ